You are here: Home / Access to Knowledge / ಅಂತರ್ರಾಷ್ಟ್ರೀಯ ಮಹಿಳಾ ದಿನಾಚರಣೆ ೨೦೧೬, ಕ್ರೈಸ್ಟ್ ವಿಶ್ವವಿದ್ಯಾಲಯ

ಅಂತರ್ರಾಷ್ಟ್ರೀಯ ಮಹಿಳಾ ದಿನಾಚರಣೆ ೨೦೧೬, ಕ್ರೈಸ್ಟ್ ವಿಶ್ವವಿದ್ಯಾಲಯ

Posted by Prashasti at Mar 12, 2016 02:00 PM |
ಮಾರ್ಚ್ ೮ ನ್ನು ವಿಶ್ವಾದ್ಯಂತ ಅಂತಾರಾಷ್ಟ್ರೀಯ ಮಹಿಳಾ ದಿನ ಎಂದು ಆಚರಿಸಲಾಗುತ್ತಿದೆ. ವಿಕಿಪೀಡಿಯದಲ್ಲಿ ಈ ಬಗ್ಗೆ ವಿಶ್ವದ ಹಲವು ಕಡೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದನ್ನು ಒಂದು ತಿಂಗಳ ಪೂರ್ತಿ ನಡೆಯುವ ಕಾರ್ಯಕ್ರಮವನ್ನಾಗಿ ಆಚರಿಸಲಾಗುತ್ತಿದೆ. ಭಾರತದಲ್ಲೂ ಈ ಬಗ್ಗೆ ವಿಶೇಷ ಕಾರ್ಯಕ್ರಮಗಳನ್ನು ಬೇರೆ ಬೇರೆ ಭಾಷೆಯ ವಿಕಿಪೀಡಿಯಗಳಲ್ಲಿ ನಡೆಸಲಾಗುತ್ತಿದೆ. ಕನ್ನಡ ವಿಕಿಪೀಡಿಯವೂ ಈ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದೆ.

ಮಾರ್ಚ್ ಎಂಟರಂದು ವಿಶ್ವಾದ್ಯಂತ ಆಚರಿಸಲಾಗುವ ವಿಶ್ವ ಮಹಿಳಾದಿನದ ಅಂಗವಾಗಿ ಬೆಂಗಳೂರಿನ ಕ್ರೈಸ್ಟ್ ಕಾಲೇಜಿನಲ್ಲಿ ಮಹಿಳಾ ಸಂಪಾದನೋತ್ಸವವನ್ನು ಆಯೋಜಿಸಲಾಗಿತ್ತು. ಕಾಲೇಜಿನ ಬಿ.ಸಿ.ಎ ಲ್ಯಾಬಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ೧೪ಕ್ಕಿಂತಲೂ ಹೆಚ್ಚು ಜನ ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಈ ದಿನ ಮಹಿಳಾ ಸಾಧಕಿಯರು ಮತ್ತು ಲೇಖಕಿಯರಿಗೆ ಸಂಬಂಧಪಟ್ಟಂತಹ ಲೇಖನಗಳು ರಚನೆಯಾದವು. ಕನ್ನಡವೊಂದೇ ಅಲ್ಲದೇ ಹಿಂದಿ, ಸಂಸ್ಕೃತ, ಇಂಗ್ಲಿಷ್ ವಿಕಿಪೀಡಿಯಕ್ಕೂ ಲೇಖನಗಳನ್ನು ಸೃಷ್ಠಿಸುತ್ತಿದ್ದ ವಿದ್ಯಾರ್ಥಿನಿಯರು ಈಗಾಗಲೇ ಇದ್ದ ಲೇಖನಗಳನ್ನು ಉತ್ತಮಪಡಿಸಲೂ ಉತ್ಸಾಹ ತೋರಿದರು. ಇವರಿಗೆ ಮಾರ್ಗದರ್ಶನ ತೋರಲು ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕಿಯಾದ ಶ್ರೀಮತಿ [] ಇವರು ಮತ್ತು ಉಪನ್ಯಾಸಕರಾದ ಶ್ರೀಯುತ [] ಇವರು ನೆರವಾದರು.

೧:೩೦ ರಿಂದ ಸುಮಾರು ೪:೦೦ ಘಂಟೆಯವರೆಗೆ ನಡೆದ ಕಾರ್ಯಕ್ರಮದಲ್ಲಿ ವಿಕಿಪೀಡಿಯದ ಸಂಪಾದಕರಾದ ಹರೀಶ್,ಪ್ರಶಸ್ತಿ,ಚಿರಾಗ್, ಅನಂತ್, ರೆಹಮಾನುದ್ದೀನ್, ತನ್ವೀರ್, ಟಿಟು ದತ್ತ ಅವರು  ಭಾಗವಹಿಸಿ ವಿದ್ಯಾರ್ಥಿನಿಯರಿಗೆ ಲೇಖನಗಳ ರಚನೆ ಮತ್ತು ಉತ್ತಮಪಡಿಸುವಿಕೆಯಲ್ಲಿ ಸಹಕರಿಸಿದರು. ಕಾರ್ಯಕ್ರಮದ ನಂತರ ವಿಕಿಪೀಡಿಯದ ಕಾರ್ಯಯೋಜನೆಗಳ ಬಗ್ಗೆಯೂ ಚರ್ಚಿಸಲಾಯಿತು,

ಸಂಪಾದನೋತ್ಸವದಲ್ಲಿ ಭಾಗವಹಿಸಿದ ವಿಕಿಪೀಡಿಯನ್ನರು ಮತ್ತು ಅವರ ಲೇಖನಗಳು ಕೆಳಗಿನಂತಿವೆ

ವಂದನೆಗಳೊಂದಿಗೆ
ಪ್ರಶಸ್ತಿ