Tenth Anniversary of Kannada Wikipedia: Udayavani Coverage
See the original published by Udayavani here.
ನ.17ರಂದು ಕನ್ನಡ ವಿಕಿಪೀಡಿಯ ದಶಮಾನೋತ್ಸವ
ಕನ್ನಡ ನೆಟ್ಟಿಗರ ಜ್ಞಾನದಾಹವನ್ನು ತಣಿಸುತ್ತಿರುವ ಕನ್ನಡ ವಿಕಿಪೀಡಿಯ 10 ವಸಂತಗಳನ್ನು ಪೂರೈಸಿರುವ ಸಂತಸವನ್ನು ಹಂಚಿಕೊಳ್ಳಲು ಇದೇ ಭಾನುವಾರ, ನವೆಂಬರ್ 17, 2013ರಂದು ಡಾ. ಎಚ್. ನರಸಿಂಹಯ್ಯ ಸಭಾಂಗಣ, ನ್ಯಾಶನಲ್ ಕಾಲೇಜು, ಬಸವನಗುಡಿಯಲ್ಲಿ ದಶಮಾನೋತ್ಸವ ಸಮಾರಂಭವನ್ನು ಆಯೋಜಿಸಿದೆ.
ವಿಕಿಪೀಡಿಯ ಮುಖಾಂತರವೇ ವಿಷಯಗಳ ವಿನಿಮಯ ಮಾಡಿಕೊಳ್ಳುತ್ತಿದ್ದ ವಿಕಿಪೀಡಿಯನ್ನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ತಾವು ಬರೆದ ಲೇಖನ, ಮಾಹಿತಿಗಳ ಬಗ್ಗೆ ಮುಖತಃ ಚರ್ಚಿಸುವ ಅವಕಾಶವನ್ನು ವಿಕಿಪೀಡಿಯ ಒದಗಿಸಿದೆ. ಜೊತೆಗೆ, ವಿಕಿಪೀಡಿಯ ಪರಿಚಯ, ಸಂಪಾದಕ ಆಗುವ ವಿಧಾನ, ಲೇಖನ ಬರೆಯುವ ಬಗೆ, ಚಿತ್ರಗಳನ್ನು ಸೇರಿಸುವ ವಿವರಗಳನ್ನು ಈ ಕಾರ್ಯಕ್ರಮದಲ್ಲಿ ತಿಳಿಸಿಕೊಡಲಾಗುವುದು.
ಕನ್ನಡದ ಖ್ಯಾತ ಲೇಖಕ ಡಾ. ಯು.ಆರ್. ಅನಂತಮೂರ್ತಿ, ಸಂಶೋಧಕ ಡಾ. ಜಿ. ವೆಂಕಟಸುಬ್ಬಯ್ಯ ಮತ್ತು ಪತ್ರಕರ್ತ ರವಿ ಹೆಗಡೆ ಅವರ ಮಾತುಗಳನ್ನು ಕೇಳುವ ಸುಯೋಗ ವಿಕಿಪೀಡಿಯನ್ನರಿಗೆ ಲಭಿಸಲಿದೆ. ಭಾಗವಹಿಸಲಿಚ್ಛಿಸುವವರು ಮೊದಲೇ ನೋಂದಾಯಿಸಿಕೊಳ್ಳಬೇಕು.
ಸ್ಥಳ : ಎಚ್.ಎನ್. ಮಲ್ಟಿಮೀಡಿಯ ಹಾಲ್, ನ್ಯಾಶನಲ್ ಕಾಲೇಜು, ಬಸವನಗುಡಿ
ದಿನಾಂಕ : ನವಂಬರ್ 17, 2013
ಸಮಯ : 9:30ರಿಂದ 13:00
ಕಾರ್ಯಕ್ರಮ ವಿವರ:
9:30-10:00 ನೋಂದಣಿ
10:00 ರಿಂದ 11:00 ಸಭಾ ಕಾರ್ಯಕ್ರಮ
ಸ್ವಾಗತ ಗೀತೆ - ಲಕ್ಷ್ಮಿ ಚೈತನ್ಯ
ಸ್ವಾಗತ ಮತ್ತು ನಿರ್ವಹಣೆ - ಡಾ. ಎ. ಸತ್ಯನಾರಾಯಣ
ಪ್ರಸ್ತಾವನೆ - ಡಾ. ಯು. ಬಿ. ಪವನಜ
ಮುಖ್ಯ ಅತಿಥಿಗಳ ಮಾತು
ಡಾ. ಯು. ಆರ್. ಅನಂತಮೂರ್ತಿ
ನಾಡೋಜ ಪ್ರೊ.ಜಿ. ವೆಂಕಟಸುಬ್ಬಯ್ಯ
ರವಿ ಹೆಗಡೆ, ಸಮೂಹ ಸಂಪಾದಕ, ಉದಯವಾಣಿ
ಹತ್ತು ವರ್ಷದಲ್ಲಿ ಉತ್ತಮ ಕೆಲಸ ಮಾಡಿದ ಪ್ರಮುಖ ವಿಕಿಪೀಡಿಯನ್ನರುಗಳಿಗೆ ಮತ್ತು ನಿರ್ವಾಹಕರುಗಳಿಗೆ ಸ್ಮರಣಿಕೆ ನೀಡಿಕೆ
ಧನ್ಯವಾದ ಸಮರ್ಪಣೆ
11:00 - 11:15 - ಚಹಾ
11:15 - 12:00
ಕನ್ನಡ ವಿಕಿಪೀಡಿಯ ಪ್ರಾತ್ಯಕ್ಷಿಕೆ - ಓಂಶಿವಪ್ರಕಾಶ
ಕ್ರಿಯೇಟಿವ್ ಕಾಮನ್ಸ್ - ಕಿರಣ್ ರವಿಕುಮಾರ
ವಿಕಿಪೀಡಿಯನ್ನರುಗಳ ಮಾತು
12:00-13:00 - ಕನ್ನಡ ವಿಕಿಪೀಡಿಯ ಸಂಪಾದನೋತ್ಸವ (edit-a-thon)
ಲೇಖನಗಳನ್ನು ಸಿದ್ಧ ಮಾಡಿಕೊಂಡು ಬಂದು ಲೇಖನ ಸೇರಿಸುವುದು.
ಸಾಧ್ಯವಿದ್ದವರು ಲ್ಯಾಪ್‌ಟಾಪ್, ಇಂಟರ್‌ನೆಟ್ ಡಾಂಗಲ್ ಮತ್ತು ಒಂದು ಸಿದ್ಧಪಡಿಸಿದ ಲೇಖನ ತಂದು ಕೊನೆಯ ಸಂಪಾದನೋತ್ಸವದಲ್ಲಿ ಪಾಲ್ಗೊಳ್ಳಬಹುದು. ಬರುವವರು ದಯವಿಟ್ಟು ಈ ಪುಟದಲ್ಲಿ ನೋಂದಾಯಿಸಿಕೊಳ್ಳಿ - https://kn.wikipedia.org/wiki/ವಿಕಿಪೀಡಿಯ:ಸಮ್ಮಿಲನ/ದಶಮಾನೋತ್ಸವ