You are here: Home / News & Media / ಕನ್ನಡ ವಿಶ್ವಕೋಶದ ಆರು ಸಂಪುಟ ವಿಕಿಪೀಡಿಯಾಗೆ

ಕನ್ನಡ ವಿಶ್ವಕೋಶದ ಆರು ಸಂಪುಟ ವಿಕಿಪೀಡಿಯಾಗೆ

by Prasad Krishna last modified Jul 18, 2014 05:11 AM
ಮೈಸೂರು ವಿಶ್ವವಿದ್ಯಾನಿಲಯಕ್ಕೆ ಮತ್ತೂಂದು ಹಿರಿಮೆಯ ಗರಿ

Read the original published in Udayavani on July 15, 2014 here.


ಶತಮಾನದ ಹೊಸ್ತಿಲಲ್ಲಿರುವ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಮತ್ತೂಂದು ಹಿರಿಮೆಯ ಗರಿ ಮೂಡಿದೆ. ದೇಶದಲ್ಲೇ ಮೊದಲ ಬಾರಿಗೆ ಮೈಸೂರು ವಿವಿ ಮೂರು ದಶಕಗಳಷ್ಟು ಹಳೆಯದಾದ ಕನ್ನಡ ವಿಶ್ವಕೋಶದ ಆರು ಸಂಪುಟಗಳನ್ನು ವಿಕಿಪೀಡಿಯಾಗೆ ಸಮರ್ಪಣೆ ಮಾಡಿದೆ.

ಪಾರಂಪರಿಕ ವಿವಿಗಳಲ್ಲಿ ಒಂದಾದ ಮೈಸೂರು ವಿಶ್ವವಿದ್ಯಾನಿಲಯವು ಹಲವಾರು ವಿದ್ವಾಂಸರ ಅವಿರತ ಶ್ರಮದಿಂದ ರೂಪುಗೊಂಡಿರುವ ವಿಶ್ವಕೋಶಗಳು ವಿಕಿಪಿಡಿಯಾದಲ್ಲಿ ಲಭ್ಯವಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ. ಮೊದಲ ಹಂತದಲ್ಲಿ ಮೂರು ದಶಕಗಳಷ್ಟು ಹಳೆಯ ಕನ್ನಡ ವಿಶ್ವಕೋಶದ ಆರು ಸಂಪುಟಗಳನ್ನು ಕ್ರಿಯೇಟಿವ್‌ ಕಾಮನ್ಸ್‌ ಪರವಾನಗಿಯಡಿ ಗಣಕೀರಣಗೊಳಿಸಿ ವಿಕಿಪಿಡಿಯಾಗೆ ಬಿಡುಗಡೆಗೊಳಿಸಲಾಗಿದೆ. ವಿಶ್ವಕೋಶ ಪರಿವರ್ತನೆ ಯೋಜಯಾದ ಚಿಜಿಠಿ.ly/ಞysಟ್ಟಛಿunಜಿಡಿಟ ಅನ್ನು ಮಂಗಳವಾರ ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿಎಂಶ್ರೀ ಭವನದಲ್ಲಿ ಮೈಸೂರು ವಿವಿ ಕುಲಪತಿ ಪ್ರೊ .ಕೆ.ಎಸ್‌. ರಂಗಪ್ಪ ಲೋಕಾರ್ಪಣೆ ಮಾಡಿದರು.

ಈಡೇರಿದ ಯೋಜನೆ: ಬಳಿಕ ಅವರು ಮಾತನಾಡಿ, ಮೈಸೂರು ವಿವಿಯಲ್ಲಿ ಉತ್ಕಷ್ಟವಾದ ಪ್ರೌಢ ಪ್ರಬಂಧಗಳಿದ್ದು ಅವುಗಳೆಲ್ಲ ಜನರಿಗೆ ತಲುಪಬೇಕೆಂಬ ನಮ್ಮ ಅಭಿಲಾಷೆಗೆ ಪೂರಕವಾಗಿ ಈ ಯೋಜನೆ ಈಡೇರಿದೆ. ನಮ್ಮ ವಿವಿಯಲ್ಲಿ ವಿಶ್ವಕೋಶದ 14 ಸಂಪುಟಗಳಿದ್ದು ಈಗ 6 ಸಂಪುಟಗಳು ವಿಕಿಪೀಡಿಯಾಗೆ ಬಿಡುಗಡೆಗೊಳಿಸಲಾಗಿದೆ. ವಿಷಯ ವಿಶ್ವಕೋಶದ 30 ಸಂಪುಟಗಳಿದ್ದು 5 ಸಂಪುಟಗಳನ್ನು ಮಾರ್ಪಡಿಸಲಾಗಿದೆ ಎಂದು ತಿಳಿಸಿದರು.

ಯಾರೂ ಮಾಹಿತಿ ನೀಡಬಹುದು: ವಿಶ್ವಕೋಶ ಪರಿವರ್ತನಾ ಯೋಜನೆಯ ರೂವಾರಿ ಡಾ. ಯು.ಬಿ. ಪವನಜ ಮಾತನಾಡಿ, ವಿಕಿಫೀಡಿಯಾದಲ್ಲಿ ಇದುವರೆಗೆ ಪ್ರಪಂಚದ 287 ಭಾಷೆಗಳು ಅಳವಡಿಕೆಯಾಗಿದ್ದು ಇವುಗಳಲ್ಲಿ ಭಾರತದ 20 ಭಾಷೆಗಳು ಸ್ಥಾನ ಪಡೆದುಕೊಂಡಿವೆ. ಮುಕ್ತವಾಗಿ, ಸ್ವತಂತ್ರ ವಿವಿ ಎಂದೆ ಕರೆಯುವ ವಿಕಿಪೀಡಿಯಾದಲ್ಲಿ ಯಾರು ಬೇಕಾದರೂ ಮಾಹಿತಿ ತುಂಬಬಹುದು. ಆದರೆ, ಕಾಪಿರೈಟ್‌ ಆಕ್ಟ್‌ನಡಿ ಬರುವ ಲೇಖನಗಳನ್ನು ಬಳಸುವಂತಿಲ್ಲ. ಅದಕ್ಕಾಗಿಯೇ ಕ್ರಿಯೇಟಿವ್‌ ಕಾಮನ್ಸ್‌ ಪರವಾನಗಿ ಲಭ್ಯವಿದ್ದು, ಇದರ ಸಹಾಯದಿಂದ ಮಾಹಿತಿ ಒದಗಿಸಬಹುದು ಎಂದರು.

ಇದೇ ವೇಳೆ ಮೈಸೂರು ವಿವಿಯ ವಿಶ್ವಕೋಶವನ್ನು ವಿಕಿಪೀಡಿಯಾಗೆ ಅಳವಡಿಸಲು ಶ್ರಮಿಸಿದ ಬೆಂಗಳೂರಿನ ಕ್ರೈಸ್ತ ವಿವಿಯ ವಿದ್ಯಾರ್ಥಿಗಳಾದ ಕೋಮಲ್‌, ಗೀತಾ, ಗೌತಮ್‌, ಪ್ರತಾಪ್‌, ಭರತ್‌, ಸ್ಮಿತಾ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ. ಆರ್‌. ರಾಮಕಷ್ಣ, ಮೈಸೂರು ವಿವಿ ಯೋಜನೆ, ಉಸ್ತುವಾರಿ ಮತ್ತು ಮೌಲ್ಯಮಾಪನ ಮಂಡಳಿಯ ನಿರ್ದೇಶಕ ಪ್ರೊ. ಎಸ್‌. ರವಿ, ಕ್ರಿಯೇಟಿವ್‌ ಕಾಮನ್ಸ್‌ನ ತೇಜಸ್‌ ಜೈನ್‌ ಇತರರಿದ್ದರು.

14ರಲ್ಲಿ 6 ಸಂಪುಟ ಸಮರ್ಪಣೆ

ಎನ್‌ಸೈಕ್ಲೋಪೀಡಿಯಾ ಬ್ರಿಟಾನಿಕ್‌ ಮಾದರಿಯಲ್ಲಿ ಮೈಸೂರು ವಿವಿಯಲ್ಲಿ 1954ರಲ್ಲಿ ವಿಶ್ವಕೋಶ ರಚಿಸುವ ಪ್ರಯತ್ನ ಆರಂಭವಾಯಿತು. 1968ರ ವರೆಗೆ ಈ ಯೋಜನೆಯು ಸಾಹಿತ್ಯ ಮತ್ತು ಸಂಸ್ಕತಿ ಅಭಿವದ್ಧಿ ಇಲಾಖೆಯ ಅಧೀನದಲ್ಲಿತ್ತು. ನಾಡೋಜ ಡಾ.ದೇಜವರೇಗೌಡ ಅವರು ಮೈಸೂರು ವಿವಿಯ ಕುಲಪತಿಯಾಗಿದ್ದ ಸಂದರ್ಭದಲ್ಲಿ ಈ ಯೋಜನೆಯನ್ನು ವಿವಿಯ ವಶಕ್ಕೆ ವಹಿಸಲಾಯಿತು. ಇದುವರೆಗೆ ಒಟ್ಟು ಕನ್ನಡ ವಿಶ್ವಕೋಶದ 14 ಸಂಪುಟಗಳನ್ನು ಹೊರತರಲಾಗಿದ್ದು, 30 ವಿಷಯ ವಿಶ್ವಕೋಶಗಳಿವೆ. ಇದೀಗ ಅವುಗಳಲ್ಲಿ 6 ಸಂಪುಟಗಳನ್ನು ವಿಕಿಪೀಡಿಯಾಗೆ ಸಮರ್ಪಿಸಲಾಗಿದೆ.

banner
ASPI-CIS Partnership

 

Donate to support our works.

 

In Flux: a technology and policy podcast by the Centre for Internet and Society