You are here: Home / News & Media / ಕನ್ನಡಕ್ಕೆ ಬಲಕೊಡುವ ಕೆಲಸವಾಗಲಿ’

ಕನ್ನಡಕ್ಕೆ ಬಲಕೊಡುವ ಕೆಲಸವಾಗಲಿ’

by Prasad Krishna last modified Mar 05, 2014 11:33 AM
Dr. U.B. Pavanaja conducted a 2-day workshop-cum-editathon at Sagara on March 1 and 2, 2014. Vijaya Karnataka published a report on March 2.

Read the original published in Vijaya Karnataka on March 2.


ಸಾಗರ: ಆಯಾ ಕಾಲಘಟ್ಟದ ಸಮಸ್ಯೆ ಗಳಿಗೆ ಭಾಷೆ ಸ್ಪಂದಿಸಬೇಕು. ಎಲ್ಲ ಕಾಲ ಕ್ಕಿಂತಲೂ ಹೆಚ್ಚಿನ ಸಮಸ್ಯೆಗಳನ್ನು ಇಂದು ಪ್ರಾದೇಶಿಕ ಭಾಷೆಗಳು ಎದುರಿಸುತ್ತಿವೆ. ಸಾಂಸ್ಕೃತಿಕ, ಜಾಗತಿಕ ಸವಾಲುಗಳಿವೆ. ಆದ್ದರಿಂದ ಕನ್ನಡಕ್ಕೆ ಬಲಕೊಡುವ ಕೆಲಸ ಆಗಬೇಕೆಂದು ಬರಹಗಾರ ಡಾ.ಸರ್ಫ್ರಾಜ್ ಚಂದ್ರಗುತ್ತಿ ಹೇಳಿದರು.

ಕನ್ನಡ ಟೈಮ್ಸ್ ಮೀಡಿಯಾ ವರ್ಲ್ಡ್ ತನ್ನ ಮೊದಲ ವಾರ್ಷಿಕೋತ್ಸವದ ಅಂಗ ವಾಗಿ ಬಿ.ವಿ.ರವೀಂದ್ರನಾಥ್ ಚಾರ್ಟ ರ್ಡ್ ಅಕೌಂಟೆಂಟ್ ಕಚೇರಿಯಲ್ಲಿ ಕನ್ನಡ ವಿಕಿಪೀಡಿಯ ಹಾಗೂ ಸೆಂಟರ್ ಫಾರ್ ಇಂಟರ್‌ನೆಟ್ ಅಂಡ್ ಸೊಸೈಟಿ ಸಹ ಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕನ್ನಡ ವಿಕಿಪೀಡಿಯ ಮಾಹಿತಿ ಕಾರ‌್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ತಂತ್ರಜ್ಞಾನಕ್ಕೆ ಕನ್ನಡ ಒಗ್ಗಿಸುವ ಕೆಲಸ ಅತ್ಯಂತ ಕಷ್ಟವಾದುದು. ಭಾಷೆಯನ್ನು, ಭಾವವನ್ನು ಕಟ್ಟಿಕೊಡುವ ಕೆಲಸ ತಂತ್ರಜ್ಞಾನ ಮಾಡಬಲ್ಲದು. ಜಗತ್ತಿನ ಆಗುಹೋಗುಗಳನ್ನು ಕನ್ನಡ ಭಾಷೆ ಮೂಲಕ ಅರ್ಥಮಾಡಿಕೊಳ್ಳುವ ಯತ್ನ ಆಗಬೇಕಾಗಿದೆ. ಜೀವ ವೈವಿಧ್ಯ ಕಾಪಾಡು ವಂತೆ ಭಾಷಾ ವೈವಿಧ್ಯ ಕಾಪಾಡಬೇಕು. ಸರಕಾರದ ಜಾಲತಾಣಗಳು ಕನ್ನಡದಲ್ಲೇ ಇರಬೇಕೆಂಬ ಆದೇಶ ಇದುವರೆಗೂ ಅನುಷ್ಠಾನಗೊಂಡಿಲ್ಲ. ಕೇರಳದಲ್ಲಿ ತಂತ್ರಜ್ಞಾನದಲ್ಲಿ ತಮಿಳು ಭಾಷೆ ಕುರಿತು 2011ರಲ್ಲಿ ರಾಜ್ಯಮಟ್ಟದ ಚರ್ಚೆಯಾಗಿ 140 ಪ್ರಬಂಧಗಳ ಮಂಡನೆ ಮಾಡಲಾ ಗಿತ್ತು. ಭಾಷೆಯನ್ನು ಸಮಕಾಲೀನಗೊಳಿ ಸುವ ಕೆಲಸಕ್ಕೆ ಎಲ್ಲರೂ ಕೈಜೋಡಿಸಬೇಕು. ಕನ್ನಡ ವಿಕಿಪೀಡಿಯದ ಕನ್ನಡದ ಕೆಲಸವನ್ನು ಕನ್ನಡಿಗರು ಬೆಂಬಲಿಸ ಬೇಕೆಂದರು.

ಆಶಯ ಮಾತನಾಡಿದ ಕನ್ನಡ ತಂತ್ರಾಂಶ ಪಂಡಿತ ಡಾ.ಯು.ಬಿ.ಪವನಜ ಮಾತನಾಡಿ, ಮೂಲತಃ ಹವಾಯಿ ಭಾಷೆಯ ಪದವಾಗಿರುವ ವಿಕಿ ಅಂದರೆ ವೇಗ ಎಂದು ಅರ್ಥ. ವೇಗವಾಗಿ ಮಾಹಿತಿ ನೀಡಬಲ್ಲ ವಿಕಿಪೀಡಿಯ ಒಂದು ಸ್ವತಂತ್ರ ವಿಶ್ವಕೋಶ. ಎಲ್ಲರ ಜ್ಞಾನವನ್ನೂ ಒಟ್ಟುಗೂಡಿಸಿ, ಅದು ಪ್ರತಿಯೊಬ್ಬರಿಗೂ ಮುಕ್ತವಾಗಿ ದೊರೆಯುವಂತಾಗ ಬೇಕೆಂಬುದು ವಿಕಿಪೀಡಿಯ ಉದ್ದೇಶ ವಾಗಿದೆ ಎಂದರು. ತಾ.ಪಂ. ಸದಸ್ಯೆ ಜ್ಯೋತಿ ಮಾತನಾಡಿದರು. ಕನ್ನಡ ಟೈಮ್ಸ್ ಮೀಡಿಯಾ ವರ್ಲ್ಡ್ ಗೌರವ ಸಲಹೆಗಾರ ಬಿ.ವಿ.ರವೀಂದ್ರ ನಾಥ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆ ಅಧ್ಯಕ್ಷ ಜಿ.ಟಿ.ಶ್ರೀಧರ ಶರ್ಮ, ಚಿನ್ಮಯ ಎಂ.ರಾವ್ ಹೊನಗೋಡು, ಬಿ.ಜಿ.ಮಂಜಪ್ಪ, ವಿದ್ಯಾಧರ ಚಿಪ್ಪಳಿ, ಗಣಪತಿ ಕಾನಗೋಡು, ಬಿ.ಎಸ್.ಚಂದ್ರಶೇಖರ ಹಾಜರಿದ್ದರು. ಸಹನಾ ಜಿ.ಭಟ್ ಪ್ರಾರ್ಥಿಸಿ, ಸತ್ಯನಾರಾಯಣಭಟ್ ಸ್ವಾಗತಿಸಿ, ವೈಶಾಲಿ ವಂದಿಸಿದರು.ಅರುಣ್ ಘಾಟೆ ನಿರೂಪಿಸಿದರು.

banner
ASPI-CIS Partnership

 

Donate to support our works.

 

In Flux: a technology and policy podcast by the Centre for Internet and Society