ವಿಕಿಪಿಡಿಯಾ ಬಳಕೆಯಿಂದ ನಮ್ಮ ಭಾಷೆ ಮತ್ತು ಶೈಲಿ ಸುಧಾರಣೆಯಾಗುತ್ತದೆ - ಡಾ. ಯು.ಬಿ. ಪವನಜ
This was published online by mangalorean.com on August 13, 2015.
ವಿಕಿಪಿಡಿಯಾ ಬರವಣಿಗೆ ಬಗ್ಗೆ ಮಾಹಿತಿ
ವಿಕಿಪಿಡಿಯಾ ಎಲ್ಲರಿಗೂ ಎಲ್ಲಾ ಕಾಲಕ್ಕೂ ಲಭ್ಯ ಇರುವ ಸ್ವತಂತ್ರ ಹಾಗೂ ಮುಕ್ತ ವೀಶ್ವಕೋಶವಾಗಿದೆ. ಇದನ್ನು ಯಾರು ಬೇಕಾದರೂ ಸ್ವತಂತ್ರವಾಗಿ ಬಳಸಬಹುದು ಎಂದು ಪ್ರಜಾವಾಣಿ ಪತ್ರಿಕೆಯ ಅಂಕಣಕಾರ ಬೆಂಗಳೂರಿನ ಡಾ. ಯು.ಬಿ. ಪವನಜ ಹೇಳಿದರು.
ಉಜಿರೆಯಲ್ಲಿ ಎಸ್.ಡಿ.ಎಮ್. ಸ್ವಾಯತ್ತ ಕಾಲೇಜಿನಲ್ಲಿ ಗುರುವಾರ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳಿಗೆ ವಿಕಿಪಿಡಿಯಾ ಬರವಣಿಗೆ ಬಗ್ಗೆ ಮಾಹಿತಿ ನೀಡಿ ಅವರು ಮಾತನಾಡಿದರು.
ಗೂಗಲ್‍ನಲ್ಲಿ ಯಾವುದೇ ಮಾಹಿತಿ ಇರುವುದಿಲ್ಲ. ಮಾಹಿತಿ ಎಲ್ಲಿ ಸಿಗುತ್ತದೆ ಎಂದು ಮಾತ್ರ ಅದು ಸೂಚಿಸುತ್ತದೆ. ಯಾವುದೇ ಪ್ರಕರಣ ಘಟಿಸಿದ ತಕ್ಷಣ ವಿಕಿಪಿಡಿಯಾದಲ್ಲಿ ಅದು ನವೀಕರಣ ಆಗುತ್ತದೆ.
2001ರಲ್ಲಿ ಅಮೇರಿಕಾದಲ್ಲಿ ಪ್ರಾರಂಭಗೊಂಡ ವಿಕಿಪಿಡಿಯಾ ಪ್ರಪಂಚನದ 290 ಭಾಷೆಗಳಲ್ಲಿ ಲಭ್ಯ ಇದೆ. 2003ರಲ್ಲಿ ಕನ್ನಡದಲ್ಲಿಯೂ ವಿಕಿಪಿಡಿಯಾ ಬರವಣಿಗೆ ಪ್ರಾರಂಭವಾಗಿದೆ. ವಿದ್ಯಾರ್ಥಿಗಳು ಸಂಶೋಧನಾ ಪ್ರವೃತ್ತಿ ಮತ್ತು ಕೌಶಲ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದ ಅವರು ವಿಕಿಪಿಡಿಯಾ ಬಳಕೆಯಿಂದ ನಮ್ಮ ಭಾಷೆ ಮತ್ತು ಶೈಲಿ ಸುಧಾರಣೆಯಾಗುತ್ತದೆ. ಮಾಹಿತಿ ಸಂಗ್ರಹದೊಂದಿಗೆ ಕ್ರೋಢೀಕರಣ ಮತ್ತು ಉಲ್ಲೇಖವೂ ಅಗತ್ಯ ಎಂದು ಅವರು ಹೇಳಿದರು.
ಪತ್ರಕರ್ತರು ನಿರಂತರ ಅಧ್ಯಯನಶೀಲರಾಗಿ ಮಾಹಿತಿ ಸಂಗ್ರಹಿಸಬೇಕು. ಭಾಷೆ ಬಳಸಿದಾಗ ಅದು ಬೆಳೆಯುತ್ತದೆ ಹಾಗೂ ನಮ್ಮ ಸಂಸ್ಕøತಿ ಉಳಿಯುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ. ಭಾಸ್ಕರ ಹೆಗ್ಡೆ ಉಪಸ್ಥಿತರಿದ್ದರು.